ಏಳ್ಮುಡಿ ಡೇನಿಯಲ್ ಅರ್ಕೇಡ್‌ನಲ್ಲಿ ಕಳೆದ 4 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಕಛೇರಿ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.18ರಂದು ಶುಭಾರಂಭಗೊಂಡಿದೆ

16Jul/21

ಸುದ್ದಿ ಸೌಹಾರ್ದ ಸಹಕಾರಿ ತಾ.ಪಂ. ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಏಳ್ಮುಡಿ ಡೇನಿಯಲ್ ಅರ್ಕೇಡ್‌ನಲ್ಲಿ ಕಳೆದ 4 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಕಛೇರಿ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.18ರಂದು ಶುಭಾರಂಭಗೊಂಡಿತು. ತಾ.ಪಂ. ಸಂಕೀರ್ಣದಲ್ಲಿ ಕಛೇರಿ ಮತ್ತು ವ್ಯವಹಾರ ವಿಭಾಗ ಉದ್ಘಾಟನೆಗೊಂಡ ಬಳಿಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿRead More…

29Aug/16

2015-16 ನೇ ಸಾಲಿನ ವಾರ್ಷಿಕ ಮಹಾಸಭೆ

ನಮ್ಮ ಸಹಕಾರಿ ಸಂಸ್ಥೆಯ 2015-2016ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 28-08-2016ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10-30ಕ್ಕೆ ಸರಿಯಾಗಿ ನಮ್ಮ ಸಂಘದ ಅಧ್ಯಕ್ಷರಾದ ಡಾ. ಯು ಪಿ ಶಿವಾನಂದ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಜೈನಭವನದ ಬಳಿಯಲ್ಲಿರುವ ರೋಟರಿ ಮನೀಶಾ ಹಾಲ್ ನಲ್ಲಿ ಜರಗಿತು.

19Sep/15

ಸುದ್ದಿ ಸೌಹಾರ್ದ ಸಹಕಾರಿ ಸಂಸ್ಥೆ ಉದ್ಘಾಟನಾ ಪೂರ್ವವಾಗಿ ಗಣಪತಿ ಹೋಮ

ಪುತ್ತೂರು: ಸೆ.27ರಂದು ನಡೆಯುವ ಸುದ್ದಿ ಸೌಹಾರ್ದ ಸಹಕಾರಿ ಸಂಸ್ಥೆಯ ಉದ್ಘಾಟನಾ ಪೂರ್ವವಾಗಿ ಸಂಸ್ಥೆಯಲ್ಲಿ ಗಣಪತಿ ಹೋಮ ಸೆ.18 ಕ್ಕೆ ನೆರವೇರಿಸಲಾಯಿತು. ಏಳ್ಮುಡಿ ಡೇನಿಯಲ್ ಆರ್ಕೆಡ್‌ನಲ್ಲಿ ಉದ್ಘಾಟನಾಗೊಳ್ಳಲಿರುವ ಸಂಸ್ಥೆಯಲ್ಲಿ ಅರ್ಚಕ ರಾಜೇಶ್ ಭಟ್‌ರವರ ನೇತೃತ್ವದಲ್ಲಿ ಎರಡು ತೆಂಗಿನ ಕಾಯಿಯ ಗಣಪತಿ ಹೋಮ ನಡೆಯಿತು. .

19Sep/15

ಸುದ್ದಿ ಸೌಹಾರ್ದ ಸಹಕಾರಿ ನಿ. ಪುತ್ತೂರು: ಅಧ್ಯಕ್ಷರಾಗಿ ಡಾ.ಯು.ಪಿ ಶಿವಾನಂದ, ಉಪಾಧ್ಯಕ್ಷರಾಗಿ ಯು.ಪಿ ರಾಮಕೃಷ್ಣ ಆಯ್ಕೆ

ಪುತ್ತೂರು: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸುದ್ದಿ ಸೌಹಾರ್ದ ಸಹಕಾರಿ ನಿ.ಪುತ್ತೂರು ಇದರ ಪ್ರಥಮ ಅಧ್ಯಕ್ಷರಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಡಾ.ಯು.ಪಿ.ಶಿವಾನಂದ ಮತ್ತು ಉಪಾಧ್ಯಕ್ಷರಾಗಿ ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಯು.ಪಿ.ರಾಮಕೃಷ್ಣ ಅವರು ಚುನಾಯಿತರಾಗಿದ್ದಾರೆ.

19Sep/15

ಉದ್ಘಾಟನೆ

ನಮ್ಮ ಸಂಸ್ಥೆಯು 2015ನೇ ಸೆಪ್ಟೆಂಬರ್ 27ನೇ ಆದಿತ್ಯವಾರ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಿಧ್ಯುಕ್ತವಾಗಿ ಆರಂಭವಾಗಲಿರುವುದು. ನಮ್ಮ ಸಂಸ್ಥೆಯ ಕಚೇರಿ ಪುತ್ತೂರಿನ ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಪಕ್ಕದಲ್ಲಿರುವ ಡೇನಿಯಲ್ ಆರ್ಕೆಡ್‌ನ ಒಂದನೇ ಮಹಡಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯುವRead More…