ಪುತ್ತೂರು: ಏಳ್ಮುಡಿ ಡೇನಿಯಲ್ ಅರ್ಕೇಡ್‌ನಲ್ಲಿ ಕಳೆದ 4 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಕಛೇರಿ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.18ರಂದು ಶುಭಾರಂಭಗೊಂಡಿತು. ತಾ.ಪಂ. ಸಂಕೀರ್ಣದಲ್ಲಿ ಕಛೇರಿ ಮತ್ತು ವ್ಯವಹಾರ ವಿಭಾಗ ಉದ್ಘಾಟನೆಗೊಂಡ ಬಳಿಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು.