ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಕಳೆದ 30 ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆ ಸದೃಢವಾಗಿ ಬೆಳೆದು ಪ್ರತಿ ಮನೆಯನ್ನು ತಲುಪುತ್ತಾ ನೈಜ ವರದಿಗಳ ಮೂಲಕ ಗ್ರಾಮಾಂತರ ಪ್ರದೇಶವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿರುವುದನ್ನು ತಾವೆಲ್ಲ ಬಲ್ಲಿರಿ. ಜತೆಗೆ ಸುದ್ದಿ ಮಾಹಿತಿ ಕೇಂದ್ರ, ಸರ್ವಿಸ್ ಸೆಂಟರ್, ಸುದ್ದಿ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ, ಸುದ್ದಿ ಶಿಕ್ಷಣ ತರಬೇತಿ ಕೇಂದ್ರ, ಸುದ್ದಿ ಆನ್‌ಲೈನ್ ಮಾರ್ಕೆಟಿಂಗ್, ಸುದ್ದಿ ಅನ್‌ಲೈನ್ ನ್ಯೂಸ್ ವೆಬ್‌ಸೈಟ್, ಸುದ್ದಿ ಚಾನೆಲ್‌ಗಳ ಮೂಲಕ ಗ್ರಾಮೀಣ ಸಂಪನ್ಮೂಲಗಳನ್ನು ಗ್ಲೋಬಲೈಸ್ ಮಾಡುವಲ್ಲಿ ಮಹತ್ತರ ಪಾತ್ರವನ್ನು ಕೂಡಾ ವಹಿಸುತ್ತಿದೆ.
ಇದೀಗ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸುದ್ದಿ ಸೌಹಾರ್ದ ಸಹಕಾರಿ ನಿ. ಪುತ್ತೂರು ಎಂಬ ಆರ್ಥಿಕ ಸಂಸ್ಥೆ ಪ್ರವರ್ತಿಸಲ್ಪಟ್ಟು ನೋಂದಾವಣೆಗೊಂಡಿರುತ್ತದೆ. ಇದರ ವ್ಯಾಪ್ತಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕಿನ ಕಂದಾಯ ಗ್ರಾಮಗಳ ನ್ನೊಳಗೊಂಡಿರುತ್ತದೆ. ಸಂಸ್ಥೆಯು 13-05-2015ರಂದು ನೋಂದಣಿಯಾಗಿದ್ದು, ನೋಂದಣಿ ಸಂಖ್ಯೆ DRP / S9 / RGN / 3365 / 2015-16 ಆಗಿರುತ್ತದೆ.
ಈಗಾಗಲೇ ಸಂಸ್ಥೆಯಲ್ಲಿ 1200 ಮಂದಿ ಆರಂಭಿಕ ಸದಸ್ಯರಿದ್ದು, ರೂ.22 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಸ್ಥೆಯ ಪ್ರಧಾನ ಕಚೇರಿ ಪುತ್ತೂರಿನಲ್ಲಿರುತ್ತದೆ..